ಕಲೆ-ಸಾಹಿತ್ಯ

ಕೋವಿಡ್-19 ಪರಿಸ್ಥಿತಿ ಉತ್ತಮ ಆರೋಗ್ಯಕ್ಕಾಗಿ ಧ್ಯಾನ!

ಧ್ಯಾನ ಎನ್ನುವುದು ತಪ್ಪಿಸಿಕೊಳ್ಳುವಿಕೆಗೆ ನೆಪವಲ್ಲ, ಅದು ವಾಸ್ತವದ ಜೊತೆಗೆ ಪ್ರಶಾಂತವಾಗಿ ಎದುರುಗೊಳ್ಳುವಿಕೆಯ ವಿಧಾನ ಎನ್ನುತ್ತಾರೆ ಹಿರಿಯ ಬೌದ್ಧ ಭಿಕ್ಷು ಥಿಚ್ ನಾತ್ ಹನ್ಹ್. ಆದರೆ ವೇಗದ ಜೀವನದ ಗತಿಯಲ್ಲಿ ಸಿಲುಕಿ ಇವೆಲ್ಲವನ್ನೂ ಮರೆತಿರುವಾಗ ಕೋವಿಡ್-19 ಪರಿಸ್ಥಿತಿ ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಭಾರತದ ಪುರಾತನ ಪದ್ಧತಿಯತ್ತ ಗಮನಹರಿಸುವಂತೆ ಮಾಡಿದೆ.

ಧ್ಯಾನ ಎನ್ನುವುದು ತಪ್ಪಿಸಿಕೊಳ್ಳುವಿಕೆಗೆ ನೆಪವಲ್ಲ, ಅದು ವಾಸ್ತವದ ಜೊತೆಗೆ ಪ್ರಶಾಂತವಾಗಿ ಎದುರುಗೊಳ್ಳುವಿಕೆಯ ವಿಧಾನ ಎನ್ನುತ್ತಾರೆ ಹಿರಿಯ ಬೌದ್ಧ ಭಿಕ್ಷು ಥಿಚ್ ನಾತ್ ಹನ್ಹ್. ಆದರೆ ವೇಗದ ಜೀವನದ ಗತಿಯಲ್ಲಿ ಸಿಲುಕಿ ಇವೆಲ್ಲವನ್ನೂ ಮರೆತಿರುವಾಗ ಕೋವಿಡ್-19 ಪರಿಸ್ಥಿತಿ ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಭಾರತದ ಪುರಾತನ ಪದ್ಧತಿಯತ್ತ ಗಮನಹರಿಸುವಂತೆ ಮಾಡಿದೆ.
ಆರೋಗ್ಯ ಹಾಗೂ ಯೋಗ ತಜ್ಞರ ಪ್ರಕಾರ ನಿಯಮಿತವಾಗಿ ಧ್ಯಾನ ಮಾಡುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಈ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕೊರೋನಾ ರೋಗವನ್ನು ನಿಯಂತ್ರಿಸಬಹುದಾಗಿದೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ರೀಸೆಂಟ್ ಸೈಂಟಿಫಿಕ್ ರಿಸರ್ಚ್ ನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನದಲ್ಲಿ ಹಲವಾರು ವೈದ್ಯರು ಒತ್ತಡದ ಜೀವನಶೈಲಿ ಹಾಗೂ ರೋಗನಿರೋಧಕ ಶಕ್ತಿಯ ಬಗ್ಗೆ ಮಾತನಾಡಿದ್ದು, ಅತಿ ಹೆಚ್ಚು ಮಾನಸಿಕ ಒತ್ತಡ ದೇಹ ಹಾಗೂ ಮನಸ್ಸಿನಲ್ಲಿನ ಗುಣಪಡಿಸುವ ಶಕ್ತಿಗಳನ್ನು ಕುಗ್ಗಿಸಬಹುದೆಂಬುದರ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಭಾರತದ ಪುರಾತನ ಪದ್ಧತಿಯಿಂದ ಹೇಗೆ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಸಾಧ್ಯ ಎಂಬ ಬಗ್ಗೆಯೂ ಬರೆದಿದ್ದಾರೆ. 
ವೈದ್ಯರ ಪ್ರಕಾರ ಧ್ಯಾನ ಟೆಲೋಮರೇಸ್ ಚಟುವಟಿಕೆ ಮತ್ತು ಟೆಲೋಮಿಯರ್‌ಗಳನ್ನು ಹೆಚ್ಚಿಸುತ್ತದೆ. ಇವುಗಳಿಂದ ದೇಹದಲ್ಲಿನ ರೋಗ ನಿರೋಧಕ ಕಣಗಳು ದೀರ್ಘಾವಧಿ ಬದುಕುತ್ತವೆ ಎಂದು ಹೇಳುತ್ತಾರೆ.

ಇವಿಷ್ಟೇ ಅಲ್ಲದೇ ಧ್ಯಾನ ಮಾಡುವುದರಿಂದ ನಿರ್ದಿಷ್ಟ ಪ್ರಕಾರದ ಕ್ಯಾನ್ಸರ್, ಆರ್ಥ್ರೈಟಿಸ್, ಆಸ್ತಮಾ ಹಾಗೂ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ರೋಗಕಾರಕವಾದ ನ್ಯೂಕ್ಲಿಯರ್ ಫ್ಯಾಕ್ಟರ್ kBಯ ಚಟುವಟಿಕೆಯನ್ನೂ ಕಡಿಮೆ ಮಾಡಲು ಸಾಧ್ಯವಿದೆ ಎನ್ನುತ್ತಾರೆ ವೈದ್ಯರು.

ಧ್ಯಾನ ನಮ್ಮ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳನ್ನು ಉತ್ತಮವಾಗಿರಿಸುವುದಕ್ಕೆ ಸಹಕಾರಿಯಾಗಲಿದೆ ಎಂದು ಹೃತ್ಪೂರ್ವಕ ಧ್ಯಾನದ ಮಾರ್ಗದರ್ಶಿ ಕಮಲೇಶ್ ಪಟೇಲ್ ಹೇಳುತ್ತಾರೆ. ಧ್ಯಾನದಿಂದ ಉಂಟಾಗುವ ಲಾಭಗಳ ಬಗ್ಗೆ ಹೈದರಾಬಾದ್ ನ ಯೋಗ ತರಬೇತುದಾರರಾದ ಹರ್ಷಿತಾ ಸೋನಿ ಮಾತನಾಡಿದ್ದು 195 ಯೋಗ ಸೂತ್ರಗಳಲ್ಲಿ ಕೇವಲ 3 ಸೂತ್ರಗಳು ಮಾತ್ರ ದೈಹಿಕ ಆಸನದ ಬಗ್ಗೆ ಹೇಳುತ್ತವೆ. ಉಳಿದದ್ದೆಲ್ಲವೂ ಮನಸ್ಸು ಹಾಗೂ ಸ್ವಭಾವತಃ ಮಾಯೆಯಾಗಿರುವ ಶಕ್ತಿಯ ಬಗ್ಗೆ ಮಾತನಾಡುತ್ತವೆ. ಈ ಹಿನ್ನೆಲೆಯಲ್ಲಿ ಪತಂಜಲಿ ವಿಶ್ವದ ಮೊದಲ ಮನಶ್ಶಾಸ್ತ್ರಜ್ಞ ಎನ್ನಬಹುದು. ಯಾವುದೇ ವ್ಯಕ್ತಿ ಧ್ಯಾನ ಮಾಡಬೇಕಾದರೆ ಆತನ ಗುರಿ ಸಮಸ್ಯೆಯಿಂದ ಮನಸ್ಸನ್ನು ಹೊರತೆಗೆಯುವುದಾಗಿರುತ್ತದೆ.  ಬಳಲುತ್ತಿರುವಾಗ ಯಾಕೆ ಬಹಳ ಜನರು ನೋವನುಭವಿಸುತ್ತಾರೆಂದರೆ ನೋವಿನ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ, ಇದು ನೋವನ್ನು ದ್ವಿಗುಣಗೊಳ್ಳುವಂತೆ ಮಾಡುತ್ತದೆ. 

ನಿಶ್ವಾಸ ಪ್ರಕ್ರಿಯೆಯನ್ನು ಸರಿಯಾಗಿ, ಆಳವಾಗಿ ಅಭ್ಯಾಸ ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಇದು ಶ್ವಾಸಕೋಶವನ್ನೂ ಶುದ್ಧೀಕರಣಗೊಳಿಸುತ್ತದೆ. ಪ್ರತಿದಿನ 5 ನಿಮಿಷಗಳ ಪ್ರಾಣಾಯಾಮ ಸಹ ಉತ್ತಮವಾದ ರೋಗನಿರೋಧಕ ಶಕ್ತಿಯಾಗಬಲ್ಲದು ಎನ್ನುತ್ತಾರೆ ಹರ್ಷಿತಾ ಸೋನಿ ಧ್ಯಾನದ ಬಗ್ಗೆ ವಿಸ್ಕಾನ್ಸಿನ್- ಮ್ಯಾಡಿಸನ್ ವಿವಿ ಅಧ್ಯಯನ ನಡೆಸಿದ್ದು, 25 ಆರೋಗ್ಯಕರ ಉದ್ಯೋಗಿಗಳನ್ನೊಳಗೊಂಡ ಸಮೀಕ್ಷೆ ನಡೆಸಿದೆ. ಇವರುಗಳಿಗೆ 8 ವಾರಗಳ ಕಾಲ ಧ್ಯಾನ ಮಾಡಲು ಸೂಚಿಸಲಾಗಿತ್ತು. ನಂತರ ಅವರ ಮೆದುಳಿನಲ್ಲಿ ಉತ್ತಮವಾದ ಪ್ರತಿಕಾಯ ಪ್ರತಿಕ್ರಿಯೆಗಳು ಕಂಡಬಂದಿದೆ. 

ನಿಮ್ಮ ಅನಿಸಿಕೆಯನ್ನು ನೀಡಿ

ನಿಮ್ಮ ಇಮೇಲ್ ವಿಳಾಸವನ್ನು ಎಲ್ಲೂ ಪ್ರಕಟಿಸಲಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ