ಹನಿಗವನಗಳು

ನೆನಪು ಸಿಹಿ ಕಹಿಗಳ ಸ್ವಾದ ಮರುವು ಬೇಕು ಬೇಡಗಳ ಭೇದ

ನೆಪವಾಗಿ ನೆನಪಾಗೊ ನೆನಪಿಗೆ
ಮರೆಯಾಗಿ ಮರೆತೋಗೊ ಮರುವಿಗೆ
ವರ ಎನ್ನುವುದೊ? ಶಾಪ ಎನ್ನುವುದೊ?
ವರವೆಂದರೆ ಆತಂಕವೇತಕೆ?
ಶಾಪವೆಂದರೆ ಆನಂದವೇತಕೆ?

ನೆನಪಿನ ಶಕ್ತಿ ಮುಖ್ಯ ಎನ್ನುವರು
ಮರುವಿನ ಶಕ್ತಿ ಸೌಖ್ಯ ಎನ್ನುವರು

ನೆನಪು ಸಿಹಿ ಕಹಿಗಳ ಸ್ವಾದ
ಮರುವು ಬೇಕು ಬೇಡಗಳ ಭೇದ
ಎರಡರ ಸೂಕ್ತ ಮಿಶ್ರಣವೇ
ನೆಮ್ಮದಿಯ ಆಹ್ಲಾದ
– ಅಮೂಲ್ಯ😊ದರ್ಶನ

ನಿಮ್ಮ ಅನಿಸಿಕೆಯನ್ನು ನೀಡಿ

ನಿಮ್ಮ ಇಮೇಲ್ ವಿಳಾಸವನ್ನು ಎಲ್ಲೂ ಪ್ರಕಟಿಸಲಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ