
ರಾಷ್ಟ್ರಕೂಟ ಶಾಪಿಂಗ್ ತಾಣಕ್ಕೆ ಸ್ವಾಗತ !!!
ರಾಷ್ಟ್ರಕೂಟ ಒಂದು ವಿನೂತನ ವಿನ್ಯಾಸದ ಬಟ್ಟೆ ಉತ್ಪಾದನಾ ಕಂಪನಿಯಾಗಿದೆ, ಎಲ್ಲಾ ಬಗೆಯ ಬಟ್ಟೆಗಳನ್ನು ಮಾರಾಟ ಮಾಡುವ ಆಧುನಿಕ ಕೌಶಲ್ಯ ಹೊಂದಿರುವ ಕನ್ನಡಿಗರ ಹೆಮ್ಮೆಯ ಕನ್ನಡ ಟಿ ಶರ್ಟ್ ಮಾರಾಟ ತಾಣ. ಕನ್ನಡ, ಕರ್ನಾಟಕ, ಕರುನಾಡು ಬರೀ ನೆಲವಲ್ಲ, ಕೇವಲ ಭಾಷೆಯಲ್ಲ.. ಅದೊಂದು ಭಾವನೆ, ಅದೊಂದು ಬಾಂಧವ್ಯ ಹೀಗಾಗಿ ನಮ್ಮ ಕಂಪನಿಯು ಕನ್ನಡ, ಕರ್ನಾಟಕದ ಬಗ್ಗೆ ಅಪಾರ ಗೌರವವನ್ನವು ಹೊಂದಿದೆ ಮತ್ತು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಹಾಗು ಕನ್ನಡದ, ಭಾರತದ ಮಹಾನುಭಾವರ ಪರಿಚಯವನ್ನು ಕೂಡ ಮಾಡಲು ಪ್ರಯತ್ನಿಸುತ್ತಿದ್ದೇವೆ.
“ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು.
ಕಾಮನಬಿಲ್ಲನು ಕಾಣುವ ಕವಿಯೊಲು
ತೆಕ್ಕನೆ ಮೈಮರೆಯುವುದು”
ಅಂತಾರಾಷ್ಟ್ರೀಯ ಮಟ್ಟದಲ್ಲೂ ರಫ್ತು
ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ರಾಷ್ಟ್ರಕೂಟ ತನ್ನ ವ್ಯವಹಾರ ತಂತ್ರವನ್ನು ನಿರಂತರವಾಗಿ ಅಭಿರುದ್ದಿಪಡಿಸುತ್ತಿದೆ. ಹಾಗು ತನ್ನದೇ ಆದ ಉತ್ಪಾದನೆ ಮತ್ತು ಸಂಸ್ಕರಣಾ ನೆಲೆಯನ್ನು ಹೊಂದಿದೆ. ನಮ್ಮದೇ ಆದ ಕಟ್ಟುನಿಟ್ಟಿನ ವ್ಯವಹಾರ ಮೌಲ್ಯಗಳನ್ನು ಪಾಲಿಸುತ್ತಿದ್ದೇವೆ, “ಹಣಕ್ಕೆ ಮೌಲ್ಯ”, “ಪರಿಪೂರ್ಣ ವ್ಯವಹಾರ ಉದ್ದೇಶಗಳು“, “ಗುಣಮಟ್ಟ ಮೊದಲು“, “ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ” ತತ್ವ ನಮ್ಮ ಮುಖ್ಯ ವ್ಯಾಪಾರ ನಿಬಂಧನೆಗಳು. ಉತ್ತಮ-ಗುಣಮಟ್ಟದ ಉತ್ಪನ್ನಗಳು ಮತ್ತು ಪ್ರಥಮ ದರ್ಜೆ ಸೇವೆಯೊಂದಿಗೆ, ಸಹಕರಿಸಲು ಮತ್ತು ತೇಜಸ್ಸನ್ನು ಸೃಷ್ಟಿಸಲು ನಾವು ಪ್ರಪಂಚದ್ಯಂತ ಸ್ನೇಹಿತರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ!
