ಹನಿಗವನಗಳು

ನಾಳೆ ಎಂಬುದು ಗೊತ್ತಿಲ್ಲ ನೆನ್ನೆ ಎಂಬುದೇ ಉಳಿದಿಲ್ಲ

ಹಳೆ ದಿನಗಳೆಲ್ಲಾ ಮರೆತು
ಹೊಸ ಕ್ಷಣಗಳಲ್ಲೆ ಬೆರೆತು
ನಿನಗಾಗಿ ನಿನಗಿರಲಿ ಪುರಸೊತ್ತು

ಮರಿಬೇಡ ಕಣೊ ಯಾವತ್ತು
ನಿನ್ನ ನಗು ಅಳುವಿಗೆ
ಕಾರಣ ನೀನೆಂಬುದ ಅರಿತು
ಬದುಕೋದು ಕಲಿ ಇವತ್ತು

ನಾಳೆ ಎಂಬುದು ಗೊತ್ತಿಲ್ಲ
ನೆನ್ನೆ ಎಂಬುದೇ ಉಳಿದಿಲ್ಲ
ನಿನಗೆಂದೇ ಕಾದಿದೆ ಇಂದೆಲ್ಲಾ
– ಅಮೂಲ್ಯ🌹ದರ್ಶನ

ನಿಮ್ಮ ಅನಿಸಿಕೆಯನ್ನು ನೀಡಿ

ನಿಮ್ಮ ಇಮೇಲ್ ವಿಳಾಸವನ್ನು ಎಲ್ಲೂ ಪ್ರಕಟಿಸಲಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ