ನಿನ್ನ ನಯನವನೇ ಅಧ್ಯಯನ ಮಾಡುತಿರುವೆ
ನಿನ್ನ ಹೃದಯವನೇ ಪಾರಾಯಣ ಮಾಡುತಿರುವೆ
ನಿನ್ನ ಭಾವನೆಗಳನೇ ಗಾಯನ ಮಾಡುತಿರುವೆ
ನಿನ್ನ ನೆನಪಿನ ದೋಣಿಯಲೇ ಪಯಣ ಮಾಡುತಿರುವೆ
ನಿನ್ನ ಸವಿ ಮಾತಿಗೆ
ನಿನ್ನ ಸಿಹಿ ಪ್ರೀತಿಗೆ
ನಿನ್ನ ಸಕ್ಕರೆ ನಗೆಗೆ
ಒಂದೇ ಒಂದು ಸಲ ಭೇಟಿಗೆ
ದಿನವಿಡೀ ಕೊರಗುತಿರುವೆ
ವರುಷವಿಡೀ ಮರುಗುತಿರುವೆ
ಜೀವನವಿಡೀ ನಿನ್ನ ಹುಡುಕುತಲೇ ತಿರುಗುತಿರುವೆ
ಓ ನನ್ನ ಒಲವೆ!!
ನೀ ಹೇಳು
ಬೇಗ ಹೇಳು
ದಯಮಾಡಿ ಹೇಳು
ನನ್ನ ನೋಡಲು ಯಾವಾಗ ಬರುವೆ
ನನ್ನ ಮನಸು ಗೆದ್ದ
ನನ್ನ ಕನಸು ಕದ್ದ
ಅಪ್ಪಟ ಶುದ್ಧ
ಬಂಗಾರದ ಹೂವೆ🌹
ಅಮೂಲ್ಯ🌹ದರ್ಶನ